ಯುವತಿ ಆತ್ಮಹತ್ಯೆ ಪ್ರಕರಣ; ಆರೋಪಿಯ ಬಂಧನ
ಮಂಗಳೂರಿನ ಗುರುಪುರ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬOಧಿಸಿ ಪ್ರೀತಿ ನಿರಾಕರಿಸಿದ ಆರೋಪದಲ್ಲಿ ಯುವಕನೋರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಗಂಜಿಮಠ ಮಳಲಿ ನಿವಾಸಿ ಮನೋಜ್ ಅಲಿಯಾಸ್ ಮುರಳಿ ಪೂಜಾರಿ ಬಂಧಿತ ಆರೋಪಿ. ಮೂಡಬಿದ್ರೆಯ ನವ್ಯಾ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವೇಳೆ ಡೆತ್ ನೋಟ್ ಪತ್ತೆಯಾಗಿದ್ದು, ಮನೋಜ್ ಹೆಸರನ್ನು ಉಲ್ಲೇಖಿಸಿದ್ದಳು. ನವ್ಯಾ ಕಳೆದ ಒಂದು ವರ್ಷದಿಂದ ಮೂಡಬಿದ್ರೆಯ ಜ್ಯುವೆಲ್ಲರಿ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದು, ಇನ್‌ಸ್ಟಾಗ್ರಾಂ ಮೂಲಕ ಮನೋಜ್ ಪರಿಚಯವಾಗಿ ಇಬ್ಬರ ನಡುವೆ ಪ್ರೀತಿ ಸಂಬOಧ ಬೆಳೆದಿತ್ತು. ನವ್ಯಾ ಮದುವೆಗೆ ಒತ್ತಾಯಿಸುತ್ತಿದ್ದರೆ, ಮನೋಜ್ ಜಾತಿ ಕಾರಣ ಮುಂದಿಟ್ಟುಕೊOಡು ಮದುವೆಗೆ ಹಿಂದೇಟು ಹಾಕುತ್ತಿದ್ದನೆಂದು ಆರೋಪಿಸಲಾಗಿದೆ. ಮದುವೆಯ ವಿಚಾರವಾಗಿ ನವ್ಯಾಳನ್ನು ನಿರ್ಲಕ್ಷಿಸಿ ದೂರವಿಟ್ಟಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನವ್ಯಾಳ ಮನೆಯವರು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಮನೋಜ್ ಮದುವೆಯಾಗುವುದಿಲ್ಲ ಎಂದು ಹೇಳುವುದರ ಜೊತೆಗೆ ಆತ್ಮಹತ್ಯೆಗೆ ಪ್ರಚೋದಿಸುವ ರೀತಿಯ ಮಾತುಗಳನ್ನು ಆಡಿದ್ದಾನೆ ಎನ್ನಲಾಗಿದೆ. ಇದಲ್ಲದೆ, ಜಾತಿ ಕುರಿತು ಅವಮಾನಕಾರಿ ಮಾತುಗಳಿಂದ ನವ್ಯಾಳನ್ನು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಈ ಮಾನಸಿಕ ಒತ್ತಡದಿಂದ ನವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.