ಕೇಮಾರು ಸಾಂದೀಪನಿ ಸಾಧನಾಶ್ರಮಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ
Sunday, June 07, 2026
ಕಾರ್ಕಳದ ಕೇಮಾರು ಸಮೀಪವಿರುವ ಸಾಂದೀಪನಿ ಸಾಧನಾಶ್ರಮಕ್ಕೆ ಸಂಸದ ಬ್ರಿಜೇಶ್ ಚೌಟ ಭೇಟಿ ನೀಡಿದರು .
ಈ ವೇಳೆ ಶ್ರೀ ಕೇಮಾರು ಈಶ ವಿಠಲದಾಸ ಅವರ ಆಶೀರ್ವಾದ ಪಡೆದ ಬ್ರಿಜೇಶ್ ಚೌಟ ಅವರು ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಬಳಿಕ ಕೆಲ ಕಾಲ ಶ್ರೀಗಳ ಜೊತೆ ಮಾತುಕತೆ ನಡೆಸಿದ ಸಂಸದ ಚೌಟ, ಕೇಮಾರು ಹಾಗೂ ಕೊಲ್ಲೂರಿನಲ್ಲಿರುವ ಶಾಖಾ ಮಠಗಳಿಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುನಿಲ್ ಆಳ್ವ, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಸಹಕಾರಿ ಧುರೀಣ ದಯಾನಂದ ಪೈ, ಯುವ ಮೋರ್ಚಾದ ಅಧ್ಯಕ್ಷ ಕುಮಾರ್ ಪ್ರಸಾದ್ ಹಾಗೂ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ ಉಪಸ್ಥಿತರಿದ್ದರು.
ಪಾಲಡ್ಕ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಶ್ ಇರುವೈಲು, ಪ್ರಮುಖರಾದ ವಿಠ್ಠಲ್ ಮೂಲ್ಕಿ, ಸುದರ್ಶನ್ ಆಚಾರ್ಯ ಕೇಮಾರು, ಜೀವಂಧರ್ ಶೆಟ್ಟಿಗಾರ್, ಚಂದ್ರ ಪೂಜಾರಿ, ಶಿವಪ್ರಸಾದ್ ಶೆಟ್ಟಿ, ರಂಜಿತ್ ಕೋಟ್ಯಾನ್, ಹರೀಶ್ ಪೂಜಾರಿ, ಶಾಶ್ವತ್ ಪೂಜಾರಿ ಮತ್ತಿತರರಿದ್ದರು.



