-->
ಉಡುಪಿಯ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ 'ಯುಕ್ತಿ' ಗಣಿತ ಥೀಮ್ ಅನಾವರಣ

ಉಡುಪಿಯ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ 'ಯುಕ್ತಿ' ಗಣಿತ ಥೀಮ್ ಅನಾವರಣ


ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಆಸಕ್ತಿ, ತಾರ್ಕಿಕ ಚಿಂತನೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸುವ ಉದ್ದೇಶದಿಂದ ಉಡುಪಿಯ ಪೆರಂಪಳ್ಳಿಯಲ್ಲಿರುವ ಪೋದಾ‌ರ್ ಅಂತರಾಷ್ಟ್ರೀಯ ಶಾಲೆಯಲ್ಲಿ 'ಯುಕ್ತಿ' ಗಣಿತ ಥೀಮ್‌ಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಯೆಟ್ (DIET) ಉಡುಪಿಯ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್ ಅವರು 'ಯುಕ್ತಿ' ಥೀಮ್ ಅನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿ, ಭಾರತದ ಹೆಮ್ಮೆಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಅಪೂರ್ವ ಸಾಧನೆಗಳನ್ನು ಸ್ಮರಿಸಿದರು. ಜೊತೆಗೆ, ವಿದ್ಯಾರ್ಥಿಗಳ ತಾರ್ಕಿಕ ಚಿಂತನೆಗೆ ಪೂರಕವಾಗಿರುವ ಶಾಲೆಯ 'ಯುಕ್ತಿ' ಥೀಮ್‌ಗೆ ತುಂಬು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಗಣಿತ ಶಿಕ್ಷಕಿಯರಾದ ಭಾಗ್ಯಲಕ್ಷ್ಮಿ ಹಾಗೂ ಧನುಶ್ರೀ ಅವರು ಗಣಿತ ಕ್ಲಬ್ ಸದಸ್ಯರನ್ನು ಪರಿಚಯಿಸಿ 'ಯುಕ್ತಿ' ಯೋಜನೆಯ ಉದ್ದೇಶಗಳು ಹಾಗೂ ವರ್ಷಪೂರ್ತಿ ನಡೆಯಲಿರುವ ವಿವಿಧ ಚಟುವಟಿಕೆಗಳ ಕುರಿತು ಪ್ರಸ್ತಾವಿಸಿದರು.

ಶಾಲೆಯ ಪ್ರಾಂಶುಪಾಲರಾದ ನೇತ್ರಾ ಎಚ್ ಮಾತನಾಡಿ,  ಗಣಿತ ಅಧ್ಯಯನದಲ್ಲಿ ಶಿಸ್ತು, ನಿರಂತರ ಅಭ್ಯಾಸ ಮತ್ತು ಸರಿಯಾದ ಕಲಿಕಾ ವಿಧಾನಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿಗಳಿಗೆ 'ಯುಕ್ತಿ ರತ್ನ' ಬ್ಯಾಡ್ಜ್ಗಳನ್ನು ಬಿಡುಗಡೆಗೊಳಿಸಿ ವಿತರಿಸಲಾಯಿತು. ವಿದ್ಯಾರ್ಥಿನಿಯರಾದ ಭಾಗ್ಯಲಕ್ಷ್ಮಿ ಹಾಗೂ ಧನುಶ್ರೀ ಅವರು 'ಯುಕ್ತಿ' ಥೀಮ್‌ನ ಮಹತ್ವ ಮತ್ತು ಉದ್ದೇಶಗಳ ಕುರಿತು ಪ್ರಸ್ತುತಪಡಿಸಿದರು . 

ಈ ಕಾರ್ಯಕ್ರಮದಲ್ಲಿ ಪೋದಾರ್ ಪ್ರೆಪ್‌ನ ಮುಖ್ಯೋಪಾಧ್ಯಾಯಿನಿ ಗೀತಾ ಎಲ್. ಪೂಜಾರಿ, ಶಾಲಾ ಆಡಳಿತಾಧಿಕಾರಿ ಹರೀಶ್ ನಾಯಕ್, ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಸುಪ್ರೀತಾ ಅತಿಥಿಗಳನ್ನು ಪರಿಚಯಿಸಿದರು . ವಿದ್ಯಾರಾಣಿ ಸ್ವಾಗತಿಸಿ, ಸವಿತಾ ಶೆಟ್ಟಿ ವಂದಿಸಿದರು.ಕಾರ್ಯಕ್ರಮವನ್ನು ಜ್ಯೋತಿ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article