-->
 ಕೇದಾರ್ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಕೇದಾರ್ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ


ಉದ್ಯಾವರದ ಹರಿಹರ ಕೇದಾರ್ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹರಿಹರ ಘಟಕ, ದೇವಾಲಯಗಳ ಸಂವರ್ಧನ ಸಮಿತಿ ಉಡುಪಿ ಹಾಗೂ ಕರಸೇವಕರ ತಂಡದ ಸಂಯುಕ್ತ ಆಶ್ರಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಜರುಗಿದವು.


ದೇವಾಲಯದ ಪ್ರಧಾನ ಅರ್ಚಕರಾದ ಸುಧೀಂದ್ರ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಶ್ರೀ ಹರಿಹರರಿಗೆ ಪ್ರಸನ್ನ ಪೂಜೆ, ಕಲ್ಪೋಕ್ತ ಪೂಜೆ, ದೀಪಾರಾಧನೆ ಸೇವೆ ಹಾಗೂ ಸಿಯಾಳ ಅಭಿಷೇಕ ಸೇವೆ ನೆರವೇರಿಸಲಾಯಿತು.


ಬಳಿಕ ಗ್ರಾಮದ ಸುಭಿಕ್ಷೆಗಾಗಿ, ಕಳೆದ 13 ದಿನಗಳಿಂದ ಮಳೆಯ ಅಭಾವ ಉಂಟಾಗಿದ್ದ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ ಹಾಗೂ ಪ್ರಕೃತಿ ವಿಕೋಪಗಳು ಸಂಭವಿಸದಿರಲಿ ಎಂಬ ಸಂಕಲ್ಪದೊಂದಿಗೆ ಗ್ರಾಮದ ಸಮಸ್ತ ರೈತರ ಪರವಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ ಸಂತೋಷ್ ಸುವರ್ಣ, ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅಧ್ಯಕ್ಷ ವಿಶ್ವನಾಥ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಜಯಕರ ಗಾಣಿಗ, ಬಜರಂಗದಳ ಘಟಕ ಸಂಯೋಜಕ ಜಯೇಂದ್ರ ಸುವರ್ಣ, ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಗುರಿಕಾರರಾದ ವೇಣುಗೋಪಾಲ ಉದ್ಯಾವರ, ಮಾಜಿ ಅಧ್ಯಕ್ಷ ದಿನೇಶ್ ಎಂ. ಸಾಲ್ಯಾನ್, ಗಾಣಿಗ ಸಮಾಜದ ಮುಖಂಡ ಶಿವರಾಮ ಗಾಣಿಗ ಕೇದಾರ್, ಉದ್ಯಾವರ ಶ್ರೀ ಭಗವತಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ಭಾಸ್ಕರ್, ಅರ್ಚಕರಾದ ಸುಬ್ರಹ್ಮಣ್ಯ ಪಾಡಿತಾಯ ಮಾಂಗೋಡು, ಗುರುಪ್ರಸಾದ್ ಭಟ್ ಮಾಂಗೋಡು, ರಂಜನ್ ಉಪಾಧ್ಯಾಯ, ಸಂಜೀವ ಪೂಜಾರಿ, ಕರಸೇವಕರ ತಂಡದ ಪ್ರವೀಣ್ ಉಮನ್ ಪಾಡಿ, ದಕ್ಷಿತ್ ಸುವರ್ಣ, ಪುರುಷೋತ್ತಮ ಗಾಣಿಗ, ಕಿಶೋರ್ ವಿ. ಸಾಲ್ಯಾನ್, ಲೋಕೇಶ್, ಯೋಗೀಶ್, ಮಾತೃಶಕ್ತಿಯ ಇಂದಿರಾ ಶಿವಾನಂದ, ಜ್ಯೋತಿ ಪ್ರವೀಣ್, ಶೋಭಾ ಜಯಕರ, ಪ್ರಿಯಾಂಕ ಸಂತೋಷ್, ಗೀತಾ ರಮೇಶ್, ಗುಲಾಬಿ ಗಾಣಿಗ, ಶ್ರೀಮತಿ ಗೀತಾ ವಿಠ್ಠಲ್, ದೇವಾಲಯದ ಮಾಜಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ಉಮನ್ ಪಾಡಿ, ಪರಮೇಶ್ವರ ಗುಡ್ಡೆ ಅಂಗಡಿ, ದಿನೇಶ್ ಎಸ್. ಕೋಟ್ಯಾನ್ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article