.jpeg)
Kundapura: ಹಂಗಳೂರು ಲಯನ್ಸ್ ಕ್ಲಬ್‌ನಿಂದ ನಿರಾಶ್ರಿತರಿಗೆ ನೆರವಿನ ಚೆಕ್ ವಿತರಣೆ
19/08/2025
ಸಂಕಾಡಿಯ ನಿರಾಶ್ರಿತರಾದ ಜಯಲಕ್ಷ್ಮಿ ಅವರಿಗೆ ಮನೆ ನಿರ್ಮಿಸಲು ಒಂದು ಲಕ್ಷದ ಚೆಕ್‌ನ್ನು ಪಿ ಸಿ ಪಿ ಆಡಿಟೋರಿಯಂನಲ್ಲಿ ವಿತರಿಸಲಾಯಿತು.
ಹಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸಂದೀಪ ಶೆಟ್ಟಿ ಅವರು ಚೆಕ್ ವಿತರಿಸಿದರು. ಸಭೆಯಲ್ಲಿ ಮೂರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಈ ವರ್ಷ ನೂತನವಾಗಿ ಎಲ್‌ಸಿಐಎಫ್ ಗೆ ದೇಣಿಗೆ ನೀಡಿದ ರಮೇಶ್ ಶೆಟ್ಟಿ ಕೆಂಚನೂರು, ರವಿ ಕಿರಣ್ ಡಿಕೋಸ್ತಾ ಹಾಗೂ ಸಂದೀಪ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಜಿಲ್ಲೆ 317 C ಇದರ ಎಲ್‌ಸಿಐಎಫ್ ಚೀಫ್ ಕೋ-ಒರ್ಡಿನೆಟರ್ ಲಯನ್ ವರುಣ್ ಕೆ. ಶೆಟ್ಟಿ, ಪ್ರಾಂತ್ಯ 5ರ ಅಧ್ಯಕ್ಷ ರಜತ್ ಹೆಗ್ಡೆ, ಕಾರ್ಯದರ್ಶಿ ವಿಲಫ್ರೆಡ್ ಮೆನೆಜಸ್ ಮತ್ತು ಕೋಶಾಧಿಕಾರಿ ನಿತೀಶ್ ಡಿಕೋಸ್ತಾ ಉಪಸ್ತಿತರಿದ್ದರು.
ಅಶ್ವಿನಿ ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.