
Kaup: "ಸ್ಟಾಪ್ ವೋಟ್ ಚೋರಿ" ಸ್ಟಿಕರ್ ಅಭಿಯಾನ; ವಿನಯ್ ಕುಮಾರ್ ಸೊರಕೆ ಚಾಲನೆ (Video)
19/08/2025
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಹಾಗೂ ರಾಷ್ಟ್ರೀಯ ಯುವ ಕಾಂಗ್ರೆಸ್ ಸಮಿತಿಯ ಸೂಚನೆಯ ಮೇರೆಗೆ ರಾಷ್ಟ್ರವ್ಯಾಪಿಯಾಗಿ ನಡೆಯುತ್ತಿರುವ "ಸ್ಟಾಪ್ ವೋಟ್ ಜೂರಿ" ಸ್ಟೀಕರ್ ಅಭಿಯಾನಕ್ಕೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಾಪು ರಾಜೀವ ಭವನದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ವಿನಯಕುಮಾರ್ ಸೊರಕೆ ಅವರು, ಕೇಂದ್ರ ಸರ್ಕಾರ ಸಂವಿಧಾನದ ಎಲ್ಲಾ ಅಸ್ತ್ರಗಳನ್ನು ಶಿಥಿಲಗೊಳಿಸುವ ಕೆಲಸ ಮಾಡುತ್ತಿದೆ. ಚುನಾವಣಾ ಆಯೋಗವನ್ನು ಕಪಿ ಮುಷ್ಠಿಯಲ್ಲಿ ಹಿಡಿದುಕೊಂಡು ಚುನಾವಣೆಯನ್ನು ಅಕ್ರಮವಾಗಿ ಗೆಲ್ಲುವ ಕೆಲಸವನ್ನು ಮಾಡುತ್ತಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಪ್ರತಿಯೊಬ್ಬರಿಗೂ ಮತದಾನ ಮಾಡುವ ಹಕ್ಕನ್ನು ನೀಡಿದೆ, ಕೆಲವೊಂದು ರಾಷ್ಟ್ರಗಳಲ್ಲಿ ಕೆಲವರಿಗೆ ಮಾತ್ರ ಮತದಾನದ ಹಕ್ಕಿದ್ದರೆ, ನಮ್ಮ ದೇಶದಲ್ಲಿ ರಾಷ್ಟ್ರಪತಿಗೂ ಒಂದೇ ಮತ ಚಲಾಯಿಸುವ ಹಕ್ಕು. ಕಟ್ಟ ಕಡೆಯ ಬಡವನಿಗೂ ಒಂದೇ ಮತವನ್ನು ಚಲಾಯಿಸುವ ಹಕ್ಕು ಇದೆ, ಆದರೆ ನಮ್ಮ ಓಟಿನ ಹಕ್ಕನ್ನು ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ದಕ್ಷಿಣ ಇದರ ಅಧ್ಯಕ್ಷ ವೈ ಸುಕುಮಾರ್, ಕಾಪು ಕಾಂಗ್ರೆಸ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಪ್ರಮುಖರಾದ ಗಣೇಶ್ ಕೋಟ್ಯಾನ್, ಶೇಖರ್ ಹೆಜಮಾಡಿ, ಸುಕುಮಾರ್, ನವೀನ್ ಎನ್. ಶೆಟ್ಟಿ, ಸನಾವರ್ ಶೇಕ್, ಪ್ರಭಾಕರ್ ಆಚಾರ್ಯ, ಮೆಲ್ವಿನ್ ಡಿಸೋಜ, ದೇವರಾಜ್ ಕಾಪು, ಉದಯ ಸನೀಲ್, ಸುನೀಲ್ ಬಂಗೇರ, ರೀನಾ ಡಿಸೋಜ ಹೆಜಮಾಡಿ, ಸುಧೀರ್ ಕರ್ಕೇರ, ಅಖಿಲೇಶ್ ಕೋಟ್ಯಾನ್, ಯುಸಿ ಶೇಕಬ್ಬ ಮುಂತಾದವರಿದ್ದರು.