Karwar: ಶಾಸಕ ಸತೀಶ್ ಸೈಲ್‌ಗೆ ಇ.ಡಿ ಶಾಕ್; ಮನೆ ಮೇಲೆ ದಾಳಿ, ಕಡತ ಪರಿಶೀಲನೆ

Karwar: ಶಾಸಕ ಸತೀಶ್ ಸೈಲ್‌ಗೆ ಇ.ಡಿ ಶಾಕ್; ಮನೆ ಮೇಲೆ ದಾಳಿ, ಕಡತ ಪರಿಶೀಲನೆ


ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿರುವ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಅವರ ಮನೆಯ ಮೇಲೆ ಇ.ಡಿ ಅಧಿಕಾರಿಗಳು ಬೆಳ್ಳಂಬೆಳಗ್ಗೆ ದಾಳಿ ನಡೆಸಿ, ಶಾಕ್ ನೀಡಿದ್ದಾರೆ.

ಇಡಿ ಅಧಿಕಾರಿ ಕೇಶವ್ ನೇತೃತ್ವದಲ್ಲಿ 12 ಪ್ಯಾರಾ ಮಿಲಿಟರಿ ಶಸ್ತ್ರಾಸ್ತ್ರ ತಂಡದೊಂದಿಗೆ ಸುಮಾರು 6 ಅಧಿಕಾರಿಗಳ ತಂಡ ದಾಳಿ ಮಾಡಿದೆ. ಈ ವೇಳೆ ಶಾಸಕರಾಗಲಿ ಅಥವಾ ಅವರ ಕುಟುಂಬದವರಾಗಲಿ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಮನೆಯಲ್ಲಿ ಇರುವ ಕೆಲಸದವನನ್ನು ವಿಚಾರಣೆಗೆ ನಡೆಸಿದ್ದಾರೆ. 

ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅದಿರು ಸಾಗಾಟ ನಡೆಸುತ್ತಿದ್ದ ಸತೀಶ್ ಸೈಲ್ ಈ ಹಿಂದೆ ಆಕ್ರಮ ಅದಿರು ಸಾಗಾಟ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು. ಈ ಬಗ್ಗೆ ಈ ಹಿಂದೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ತಂಡದಿಂದ ದೂರು ದಾಖಲಿಸಲಾಗಿತ್ತು. ಜನಪ್ರತಿನಿಧಿಗಳ ನ್ಯಾಯಾಲಯದಿಂದ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹೈಕೋರ್ಟ್ ಮೂಲಕ ಜಾಮೀನು ಪಡೆದು ಸತೀಶ್ ಸೈಲ್ ಹೊರಬಂದಿದ್ದರು. ಇನ್ನು ಆದಾಯಕ್ಕಿಂತ ಅಧಿಕ ಹಣ ಮಾಡಿರುವ ಆರೋಪ ಸಹ ಇವರ ಮೇಲೆ ಇದ್ದು, ಇದೀಗ ಇ.ಡಿ ಅಧಿಕಾರಿಗಳು ದಾಳಿ ಮಾಡಿ, ವಿಚಾರಣೆ ನಡೆಸಿದ್ದಾರೆ. 


Ads on article

Advertise in articles 1

advertising articles 2

Advertise under the article