
Kundapura: ವಡ್ಡರ್ಸೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ಆರೋಗ್ಯ ಶಿಬಿರ
19/08/2025
ಕೋಟ ರೋಟರಿ ಕ್ಲಬ್, ಗಿಳಿಯಾರು ಕೋಟ ಲಯನ್ಸ್ ಕ್ಲಬ್, ಶಿರೂರು ಮುದ್ದು ಮನೆ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, , ಉಡುಪಿ ಜಿಲ್ಲೆ ಆರೋಗ್ಯ ಹಾಗೂ ಅಂಧತ್ವ ನಿವಾರಣಾ ವಿಭಾಗ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಡ್ಡರ್ಸೆ ಗ್ರಾಮ ಪಂಚಾಯತ್ ,ಪ್ರಾಥಮಿಕ ಆರೋಗ್ಯ ಕೇಂದ್ರ ಸೈಬರಕಟ್ಟೆ , ಆಯುಷ್ಮಾನ ಆರೋಗ್ಯ ಮಂದಿರ ಬನ್ನಾಡಿ, ಜ್ಯುವೆಲ್ಲರ್ಸ್ ಅಸೋಸಿಯೇಶನ್ ಕುಂದಾಪುರ, ಕೋಟ ಶ್ರೀದೇವಿ ಜ್ಯುವೆಲ್ಲರ್ಸ್ ಸಂಯುಕ್ತ ಆಶ್ರಯದಲ್ಲಿ ದಿ. ಮಂಜುನಾಥ್ ಅಕ್ಸಾಲರ ಧರ್ಮಪತ್ನಿ ದಿ. ಪದ್ದು ಆಚಾರ್ ಸ್ಮರಣಾರ್ಥ ಉಚಿತ ನೇತ್ರ ಶಿಬಿರ ಮತ್ತು ಆರೋಗ್ಯ ತಪಾಸಣೆ ಶಿಬಿರವು ವಡ್ಡರ್ಸೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು. ವಡ್ಡರ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಲೋಕೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಸಂಘಟಕ ರೋ. ಸೀತಾರಾಮ ಆಚಾರ್ಯ, ವೈದ್ಯಾಧಿಕಾರಿ ಡಾ. ವಿಶ್ವನಾಥ್ ಬಿ, ಕೋಟ ಲಯನ್ಸ್ ಕ್ಲಬ್ ಅಧ್ಯಕ್ಷ ಗಿಳಿಯಾರು ವಿಜಯ್ ಕುಮಾರ್ ಶೆಟ್ಟಿ, ಕುಂದಾಪುರದ ಜ್ಯುವೆಲ್ಲರ್ಸ್ ಅಸೋಸಿಯೇಶನ್ ಅಧ್ಯಕ್ಷ ರೋ. ಗಣೇಶ ಶೇಟ್, ಕೋಟ ಸಾಲಿಗ್ರಾಮದ ರೋಟರಿ ಕ್ಲಬ್ ಅಧ್ಯಕ್ಷ ಯೋಗೇಶ್ ಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಆಯುಷ್ಮಾನ ಆರೋಗ್ಯ ಮಂದಿರದ ಅಧಿಕಾರಿ ಜ್ಯೋತಿ ಅವರು ಉಪಸ್ಥಿತರಿದ್ದರು