Manipal: ಗಾಂಜಾ, ಡ್ರಗ್ಸ್ ಮಾರಾಟ ಜಾಲ ಪತ್ತೆ; ಆರೋಪಿಗಳ ಬಂಧನ
ಮಣಿಪಾಲದಲ್ಲಿ ಗಾಂಜಾ ಮತ್ತು ಎಲ್‌ಎಸ್‌ಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಗಾಂಜಾ ಸೇವನೆ ಮಾಡಿದ ನಾಲ್ಕು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕೇರಳದ ತಿರುವನಂತಪುರ ಜಿಲ್ಲೆಯ ಅಫ್ಶಿನ್(26), ಕೇರಳ ಕಾಸರಗೋಡಿನ ಮನೀಶ್(34), ಇಂದ್ರಾಳಿ ನಿವಾಸಿ ಶಿವನಿಧಿ ಆಚಾರ್ಯ(20) ಬಂಧಿತರು.
ಅಲ್ಲದೇ ಗಾಂಜಾ ಸೇವನೆ ಮಾಡಿದ ಕೇರಳ ಪಾಲಕ್ಕಾಡ್ ಜಿಲ್ಲೆಯ ಅಜೀಸ್(28), ಕೇರಳ ಕೋಲಮನ್ನು ನಿವಾಸಿ ವಿಪಿನ್(32), ಕೇರಳ ತ್ರಿಶೂರು ಜಿಲ್ಲೆಯ ಬಿಪಿನ್(24), ಕೇರಳ ಮಲ್ಲಪಳ್ಳಿಯ ಅಖಿಲ್(26) ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೆಂಗಳೂರಿನಿ0ದ ಗಾಂಜಾ ಮತ್ತು ಡ್ರಗ್ಸ್ ತರಿಸಿ ಮಣಿಪಾಲದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದ ತಂಡವು ಹೆರ್ಗ ಗ್ರಾಮದ ಈಶ್ವರನಗರ ಸಮೀಪ ಅಫ್ಶಿನ್ ಮತ್ತು ಶಿವನಿಧಿ ಆಚಾರ್ಯನನ್ನು ಬಂಧಿಸಿದ್ದಾರೆ. ಬಂಧಿತರಿAದ 1 ಕೆಜಿ 237 ಗ್ರಾಂ ಗಾಂಜಾ, 0.038 ಗ್ರಾಂ ಎಲ್‌ಎಸ್‌ಡಿ ಸ್ಟಿçಪ್, ಡಿಜಿಟಲ್ ಸ್ಕೇಲ್, 2 ಸಾವಿರ ರೂಪಾಯಿ ನಗದು ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಗಾಂಜಾ ಮಾರಾಟದ ಇನ್ನೋರ್ವ ಆರೋಪಿ ಮನೀಶ್‌ನನ್ನು ಮಣಿಪಾಲದ ವಿದ್ಯಾರಣ್ಯ ಫ್ಲಾö್ಯಟ್‌ನಲ್ಲಿ ಮಣಿಪಾಲ ಎಸೈ ಅಕ್ಷಯಕುಮಾರಿ ನೇತೃತ್ವ ತಂಡ ಬಂಧಿಸಿದೆ. ಗಾಂಜಾ ಸೇವನೆ ಮಾಡಿದ ನಾಲ್ಕು ಮಂದಿ ಆರೋಪಿಗಳು ಕೇರಳದ ಕಾರ್ಮಿಕರು ಎಂದು ತಿಳಿದು ಬಂದಿದೆ.