Udupi: ಪತ್ರಕರ್ತ ದಿ. ಬಿ.ಟಿ ರಂಜನ್ ಪುತ್ರಿ ಸೌಮ್ಯ ಅನಾರೋಗ್ಯದಿಂದ ನಿಧನ;
16/08/2025
ಹಿರಿಯ ಪತ್ರಕರ್ತ ದಿ. ಬಿ.ಟಿ ರಂಜನ್ ಅವರ ಪುತ್ರಿ ಬಿ.ಟಿ ಸೌಮ್ಯ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೂಲತಃ ಉಪ್ಪಿನಂಗಡಿ ನಿವಾಸಿಯಾದ ಸೌಮ್ಯ, ಪತಿ ವೈಭವ್ ಅವರೊಂದಿಗೆ ಮಣಿಪಾಲದಲ್ಲಿ ವಾಸವಾಗಿದ್ದರು.
ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದ ಸೌಮ್ಯ ಅವರು ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೌಮ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂಧಿಸದೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.