Bangalore: ಪ್ರಧಾನಿ ಮೋದಿಯಿಂದ ಮೆಟ್ರೊ ಹಳದಿ ಮಾರ್ಗ ಉದ್ಘಾಟನೆ

Bangalore: ಪ್ರಧಾನಿ ಮೋದಿಯಿಂದ ಮೆಟ್ರೊ ಹಳದಿ ಮಾರ್ಗ ಉದ್ಘಾಟನೆ

 


ಬಹು ನಿರೀಕ್ಷಿತ ನಮ್ಮ ಮೆಟ್ರೊ ಹಳದಿ ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಉದ್ಘಾಟಿಸಿದರು. ಈ ಹಳದಿ ಮೆಟ್ರೊ ಆರ್.ವಿ. ರೋಡ್ ಸ್ಟೇಷನ್ ನಿಂದ ಬೊಮ್ಮಸಂದ್ರದವರೆಗೆ ಸಾರ್ವಜನಿಕರ ಪ್ರಯಾಣಕ್ಕೆ ಲಭ್ಯವಾಗಿದೆ. 

ನಂತರ ಎಲೆಕ್ಟ್ರಾನಿಕ್ ಸಿಟಿ ವರೆಗೆ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಕೆಲ ನಿಮಿಷ ಶಾಲಾ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. 

ಈ ಸಂದರ್ಭ ಪ್ರಧಾನಿ ಅವರು 3 ವಂದೇ ಭಾರತ್ ರೈಲುಗಳಿಗೂ ಹಸಿರು ನಿಶಾನೆ ನೀಡಿದ್ದು, ಇದರೊಂದಿಗೆ ಕೆ.ಎಸ್.ಆರ್. ಬೆಂಗಳೂರು-ಬೆಳಗಾವಿ ಸರ್ವೀಸ್, ಶ್ರೀಮಾತಾ ವೈಶ್ಣೋದೇವಿ - ಅಮೃತಸರ ಸರ್ವೀಸ್ ಹಾಗೂ ನಾಗಪುರ (ಅಜ್ನಿ) - ಪೂನಾ ಸರ್ವೀಸ್ ರೈಲುಗಳಿಗೆ.ಚಾಲನೆ ದೊರೆತಂತಾಗಿದೆ. 

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧಾರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಪಾಲ ಥಾವರಚ ಚಂದ್ ಗೆಹ್ಲೋಟ್, ಸಚಿವ ದಿನೇಶ್ ಗುಂಡುರಾವ್ ಮತ್ತಿತರರು ಪಾಲ್ಗೊಂಡರು. 


Ads on article

Advertise in articles 1

advertising articles 2

Advertise under the article