.jpeg)
Manipal: 4ನೇ ವರ್ಷದ ಫ್ರೀಡಂ ರನ್ ಮ್ಯಾರಾಥಾನ್; ಶಾಸಕ ಯಶ್‌ಪಾಲ್ ಚಾಲನೆ
10/08/2025
ಮಣಿಪಾಲ ಕೆನರಾ ರನ್ನರ್ಸ್ ಕ್ಲಬ್ ಇವರ ವತಿಯಿಂದ 4ನೇ ವರ್ಷದ ಫ್ರೀಡಂ ರನ್ ಮ್ಯಾರಥಾನ್ ಮಣಿಪಾಲದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್‌ಪಾಲ್ ಸುವರ್ಣ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕ ಯಶ್‌ಪಾಲ್ ಸುವರ್ಣ, ಕಳೆದ 4 ವರ್ಷಗಳಿಂದ ಮ್ಯಾರಥಾನ್ ಆಯೋಜಿಸುವ ಮೂಲಕ ಯುವಜನತೆಗೆ ಕೆನರಾ ರನ್ನರ್ಸ್ ಕ್ಲಬ್ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಸಮಾರಂಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಹಾಗೂ ಕೆನರಾ ಬ್ಯಾಂಕಿನ ಹಿರಿಯ ಅಧಿಕಾರಿಗಳು, ಕೆನರಾ ರನ್ನರ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.