Udupi: ಕಡಿಯಾಳಿ ಮಹಿಷಮರ್ಧಿನಿ ದೇಗುಲದಲ್ಲಿ ಮಾತೃ ಮಂಡಳಿಯಿಂದ ವರಮಹಾಲಕ್ಷ್ಮಿ ಪೂಜೆ (video)
11/08/2025
ಉಡುಪಿ ಕಡಿಯಾಳಿ ಮಾತೃ ಮಂಡಳಿಯ ವತಿಯಿಂದ ಶ್ರೀ ಮಹಿಷಮರ್ದಿನಿ ದೇವರ ಸನ್ನಿಧಿಯಲ್ಲಿ 41ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನಡೆಯಿತು.
ವೇದಮೂರ್ತಿ ಪಾಡಿಗಾರು ಶ್ರೀನಿವಾಸ್ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ವೃಂದದವರು ಧಾರ್ಮಿಕ ಪೂಜಾ ಕಾರ್ಯ ನಡೆಸಿಕೊಟ್ಟರು. ಶ್ರೀ ದೇವರಿಗೆ ವಿಶೇಷ ಅಲಂಕಾರ, ವಿಶೇಷವಾಗಿ ರಚಿಸಿದ ಮಂಡಲದಲ್ಲಿ ಕಳಶ ಪ್ರತಿಷ್ಠೆ, ಸಾಮೂಹಿಕ ಕುಂಕುಮ ಅರ್ಚನೆ, ಲಲಿತಾ ಸಹಸ್ರ ನಾಮ ಪಠಣ, ಮಹಾಪೂಜೆ ಸಹಿತ ಪ್ರಸಾದ ವಿತರಣೆ ನಡೆಯಿತು.
ಧಾರ್ಮಿಕ ಸಭಾ ಕಾರ್ಯದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ದೇವಳದ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ವಿಜಯ ರಾಘವೇಂದ್ರ, ಸಮಾಜ ಸೇವಕಿ ಪೂರ್ಣಿಮಾ ಸುರೇಶ್ ನಾಯಕ್, ಮಾತೃ ಮಂಡಳಿಯ ಪ್ರಮುಖರಾದ ಸುಪ್ರಭಾ ಆಚಾರ್ಯ, ಪದ್ಮಾ ರತ್ನಾಕರ್, ಜ್ಯೋತಿ ಪೈ, ಜಯಶ್ರೀ ಶೇಟ್ ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.