.jpeg)
Udupi: ನಾಡಿನೆಲ್ಲೆಡೆ ವರ ಮಹಾಲಕ್ಷ್ಮೀ ವ್ರತ; ಮನೆಗಳಲ್ಲಿ ಅಷ್ಠ ಲಕ್ಷ್ಮೀಯರ ಪೂಜೆ
08/08/2025
ಆಗಸ್ಟ್ 8ರಂದು ನಾಡಿನೆಲ್ಲೆಡೆ ವರ ಮಹಾಲಕ್ಷ್ಮಿ ಪೂಜೆಯನ್ನು ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸುವವರ ಮಹಾಲಕ್ಷ್ಮಿ ವ್ರತವನ್ನು ಹೆಂಗಳೆಯರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ.
ಈ ಪೂಜೆಯನ್ನು ಆಚರಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಅಷ್ಟ ಲಕ್ಷ್ಮಿಯರ ಆಶೀರ್ವಾದ ದೊರೆತು ಜೀವನದಲ್ಲಿ ಸಂಪತ್ತು, ಸಮೃದ್ಧಿ, ಸಂತೋಷ ವೃದ್ಧಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಎಲ್ಲಾ ಮನೆಗಳಲ್ಲಿ ಹೆಂಗಳೆಯರು ವರ ಮಹಾಲಕ್ಷ್ಮಿ ವ್ರತವನ್ನು ಕೈಗೊಂಡು ಪೂಜೆಯನ್ನು ನೆರವೇರಿಸುತ್ತಾರೆ.
ಬೆಳಗ್ಗೆದ್ದು ಸ್ನಾನಾದಿಗಳನ್ನು ಮುಗಿಸಿ, ಮನೆ ಸ್ವಚ್ಛಗೊಳಿಸಿ, ದೇವಿಗೆ ಸೀರೆ ಉಡಿಸಿ ಕಳಸವಿಟ್ಟು, ವಸ್ತç ಒಡವೆ ಧನ ಕನಕಾದಿಗಳನ್ನಿಟ್ಟು ಪೂಜೆ ನೆರವೇರಿಸುತ್ತಾರೆ. ಮಹಿಳೆಯರೇ ಮಾಡುವ ಹಬ್ಬ ಇದಾಗಿರುವುದರಿಂದ ಹೊಸ ಉಡುಗೆ ತೊಟ್ಟು ದೇವಿಯ ಪೂಜಾ ಕೈಂಕರ್ಯ್ಯ ನೆರವೇರಿಸುತ್ತಾರೆ. ಕೆಲವೆಡೆ ಸಂಜೆ ಹೊತ್ತು ಮುತ್ತೈದೆಯರನ್ನು ಅರಶಿನ ಕುಂಕುಮಕ್ಕೆ ಕರೆಯುವುದು ಬಹುತೇಕ ವಾಡಿಕೆಯಿದೆ. ದೇವಸ್ಥಾನಗಳಲ್ಲೂ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿದೆ. ಒಟ್ಟಿನಲ್ಲಿ ಇಂದು ಬೆಳಗ್ಗೆಯಿಂದ ಸಂಜೆವರೆಗೂ ನಾಡಿನೆಲ್ಲೆಡೆ ಮನೆಗಳಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.