
Udupi: ಕಾಂತಾರ ಸಿನಿಮಾ ಕಲಾವಿದ ಕುಸಿದು ಬಿದ್ದು ಮೃತ್ಯು
08/08/2025
ಕಾಂತಾರ ಮೊದಲ ಚಿತ್ರದ ಕಲಾವಿದರೊಬ್ಬರು ಮೃತಪಟ್ಟ ಘಟನೆ ಹಿರಿಯಡ್ಕದಲ್ಲಿ ನಡೆದಿದೆ. ಕಾಂತರಾ ಮೊದಲ ಚಿತ್ರದಲ್ಲಿ ನ್ಯಾಯವಾದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪೆರ್ಡೂರು ಮೂಲದ ಟಿ. ಪ್ರಭಾಕರ ಕಲ್ಯಾಣಿ ಮೃತಪಟ್ಟವರು.
ಇವರು ಬ್ಯಾಂಕ್ ಆಫ್ ಬರೋಡದ ನಿವೃತ್ತ ಅಧಿಕಾರಿ. ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿ ಬಿದ್ದಿದ್ದರು. ಆಸ್ಪತ್ರೆಗೆ ದಾಲಿಸಿ, ಚಿಕಿತ್ಸೆ ಪಡೆದ ನಂತರ ಮನೆಗೆ ವಾಪಾಸ್ಸಾಗಿದ್ದರು. ಆಗಸ್ಟ್ 8ರ ಬೆಳಗ್ಗೆ ಕೈಕಾಲು ನೋವೆಂದು ಹೇಳುತ್ತಿದ್ದ ಪ್ರಭಾಕರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದಾರೆ.
ರಂಗ ಕಲಾವಿದರಾಗಿ ವಿವಿಧ ನಾಟಕಗಳಲ್ಲಿ ಸಕ್ರೀಯರಾಗಿದ್ದ ಪ್ರಭಾಕರ್ ಅವರು ಕಾಂತಾರ ಸಿನಿಮಾದಲ್ಲೂ ನ್ಯಾಯವಾದಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.